Daily Crime Reports

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05/02/2020

09-02-2020


ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ.17/2020 ಕಲಂ 392 ಐಪಿಸಿ:-ಫಿಯರ್ಾದಿ ಸಾರಾಂಂಶವೇನೆಂದರೆ, ಸುಮಾರು ದಿವಸಗಳಿಂದ ನಾನು ನಮ್ಮೂರಿನ ನಮ್ಮ ಜನಾಂಗದ ಆಷಿಪ್ ಈತನ ಲಾರಿ ನಂ ಕೆ.ಎ 56-6640, ನೇದ್ದರ ಮೇಲೆ ಚಾಲಕನಾಗಿ ಕೆಲಸ ಮಾಡಿಕೊಂಡು ಇದ್ದೇನೆ. ನಮ್ಮ ಲಾರಿಯ ಮೇಲೆ ನಮ್ಮೂರಿನ ಅಸನ್ ತಂದೆ ನದಾಫ್ ಈತನು ಕ್ಲಿನ್ನರ ಅಂತಾ ಕೆಲಸ ಮಾಡಿಕೊಂಡು ಇದ್ದಾನೆ. ಹೀಗಿದ್ದು, ನಾನು ಹಾಗೂ ಕ್ಲಿನ್ನರ್ ಇಬ್ಬರು ಕೂಡಿ ದಿನಾಂಕ 26/01/2020 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ, ಸದರಿ ಲಾರಿಯಲ್ಲಿ ರಾಯಚೂರದಿಂದ ಅಕ್ಕಿ ಲೋಡ್ ಮಾಡಿಕೊಂಡು, ಯಾದಗಿರಿ ಮಾರ್ಗವಾಗಿ, ಬಾಂಬೆಗೆ ಹೋಗುವಾಗ, ಯಾದಗಿರಿ-ವಾಡಿ ರೋಡಿನ ಮೇಲೆ ಡಾನ್ ಬಾಸ್ಕೋ ಶಾಲೆಯ ಹತ್ತಿರ ಯಾರೋ ಇಬ್ಬರು ಮೋಟರ್ ಸೈಕಲ್ ಮೇಲೆ ನಮ್ಮ ಹಿಂದಿನಿಂದ ಬಂದು, ನಮ್ಮ ಲಾರಿಗೆ ಕೈ ಮಾಡಿ ನಿಲ್ಲಿಸಿ, ಮೋಟರ್ ಸೈಕಲ್ ಅಡ್ಡವಾಗಿ ನಿಲ್ಲಿಸಿದರು. ಅವರು ನಮಗೆ ವಿನಾ ಕಾರಣ ಲೇ ಸೋಳೆ ಮಗನೆ ಡ್ರೈವರ್ ಯಾದಗಿರಿ ಸಿ.ಟಿಯಲ್ಲಿ ನಿನ್ನ ಲಾರಿ ನನ್ನ ಮೋಟರ್ ಸೈಕಲ್ಗೆ ಡಿಕ್ಕಿ ಮಾಡಿ ಹಾಗೆಯೇ ನಿಲ್ಲಿಸದೆ ಬಂದೆಯ ಮಗನೇ ಅಂತಾ ಅಂದರು. ಆಗ ನಾವು ಯಾವುದೇ ಗಾಡಿಗೆ ನಾವು ಡಿಕ್ಕಿ ಪಡಿಸಿಲ್ಲ ಅಂತಾ ಅಂದರೂ ಕೇಳದೆ ನನಗೆ ಹಾಗೂ ನಮ್ಮ ಕ್ಲಿನ್ನರ್ ಅಸನ್ ತಂದೆ ನದಾಫ್ ಈತನಿಗೆ ಕೈಯಿಂದ ಕಪಾಳಕ್ಕೆ, ಒಂದೆರಡು ಏಟು ಹೊಡೆದು, ಜೇಬಿಗೆ ಕೈ ನನ್ನ ಹತ್ತಿರ ಇದ್ದ ಲಾರಿ ಬಾಡಿಗೆಯ ಹಣ 14,000/ ರೂ|| ಗಳನ್ನು ಕಸೆದುಕೊಂಡು ಹೋದರು. ನಮ್ಮ ಲಾರಿಯ ಬೆಳಕಿನಲ್ಲಿ ಅವರ ಮೋಟರ್ ಸೈಕಲ್ ನೋಡಲಾಗಿ ಎಫ್.ಜೆಡ್ ಕಂಪನಿಯ ಮೋಟರ್ ಸೈಕಲ್ ಇದ್ದು, ಅದರ ನಂ- ಟಿ.ಎಸ್ 09 ಇಹೆಚ್ 8995, ಅಂತಾ ಇತ್ತು. ಅವರಿಬ್ಬರು ಸುಮಾರು 25 ರಿಂದ 30 ವರ್ಷದವರಿದ್ದು, ಪ್ಯಾಂಟ್ ಶಟರ್್ ಧಿರಿಸಿದ್ದರು. ಮುಂದೆ ಅವರನ್ನು ನೋಡಿದಲ್ಲಿ ನಾನು ಗುತರ್ಿಸುತ್ತೇನೆ. ಇಲ್ಲಿ ನಡೆದ ಘಟನೆಯ ಬಗ್ಗೆ ನಾವು ಯಾದಗಿರಿ ಕಂಟ್ರೋಲ್ ರೂಮ್ ಹಾಗೂ ನಮ್ಮ ಮಾಲಿಕನಿಗೆ ಪೋನ್ ಮಾಡಿ ವಿಷಯ ತಿಳಿಸಿದೆವು. ಆಗ ಅವರು ಆಯಿತು, ಮೊದಲು ನೀವು ಅರ್ಜಂಟ್ ಆಗಿ ಬಾಂಬೆಗೆ ಹೋಗಿ ಮಾಲು ಡೆಲಿವರಿ ಮಾಡಿರಿ, ಮುಂದೆ ಈ ಬಗ್ಗೆ ನೋಡೋಣ ಅಂತಾ ಅಂದಿದ್ದರಿಂದ ನಾವು ಬಾಂಬೆಗೆ ಹೋಗಿ ಲಾರಿ ಅನ್ ಲೋಡ್ ಮಾಡಿ, ಅಲ್ಲಿಂದ ಮತ್ತೆ ಹೈದ್ರಬಾದಗೆ ಲೋಡ್ ಮಾಡಿಕೊಂಡು ಹೋಗಿ, ಅನ್ ಲೋಡ್ ಮಾಡಿ, ರಾಯಚೂರಿಗೆ ಬಂದು ಅಕ್ಕಿ ಲೋಡ್ ಮಾಡಿಕೊಂಡು ಇಂದು ಬಾಂಬೆಗೆ ಹೋಗುವಾಗ ಯಾದಗಿರಿ ನಗರ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ. ಲಾರಿ ಲೋಡ್ ಹಾಗೂ ಅನ್ ಮಾಡಿಕೊಂಡು ಠಾಣೆಗೆ ಬಂದು ದೂರು ನೀಡುವಲ್ಲಿ ತಡವಾಗಿರುತ್ತದೆ. ನಮಗೆ ಹೊಡೆ ಬಡೆ ಮಾಡಿ, ನನ್ನ ಹತ್ತಿರ ಇದ್ದ ಹಣ ಕಸೆದುಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 17/2020 ಕಲಂ 392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.