ಮಾನ್ಯ ಪೊಲೀಸ್ ಪ್ರದಾನ ಕಛೇರಿ ಸ್ಥಾಯಿ ಆದೇಶÀ ಸಂ. 1017ರ ಪ್ರಕಾರ ಸುಧಾರಿತ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಇರುತ್ತದೆ. ಬೀಟ್ ವ್ಯವಸ್ಥೆಯು ಪೊಲೀಸ್ ಕರ್ತವ್ಯಗಳಿಗೆ ಅಗತ್ಯವಾದ ಬುನಾದಿಯನ್ನು ಒದಗಿಸುವ ಬಹುಮುಖ್ಯ ವ್ಯವಸ್ಥೆಯಾಗಿದೆ. ಬೀಟ್ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಐ ನಿರ್ವಹಿಸಿದರೆ ಪೊಲೀಸ್ ಇಲಾಖೆಯು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಸಾದ್ಯ ವಾಗುತ್ತದೆ. ಅಲ್ಲದೆ ಸಮುದಾಯವನ್ನು ಒಳಗೊಳ್ಳುವ ಜನಸ್ನೆಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಲು ಗಸ್ತು ವ್ಯವಸ್ಥೆಯೆ ತಳಹದಿಯಾಗಿದೆ. ಪ್ರತಿ ಬೀಟ್ನಲ್ಲಿ ಸಾರ್ವಜನಿಕರನ್ನು ಬೀಟ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳುವ ವ್ಯವಸ್ಥೆಯನ್ನು ವಿಸ್ತರಿಸಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜನ ಸ್ನೆಹಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿತ ಬೀಟ್ ವ್ಯವಸ್ಥೆಯ ಮೂಲಕ ರೂಪಿಸಲು ಅನುವು ಮಾಡಿಕೊಡಲಾಗಿದೆ.