Daily Crime Reports

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/02/2020

09-02-2020


ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 16/2020 ಕಲಂ 78(3) ಕೆ.ಪಿ ಎಕ್ಟ್ :- ನಿನ್ನೆ ದಿನಾಂಕ.03/02/2020 ರಂದು 8-45 ಪಿಎಂಕ್ಕೆ ಶ್ರೀ ಕೃಷ್ಣ ಸುಬೇದಾರ ಪಿ.ಎಸ್.ಐ(ಅ.ವಿ) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯನ್ನು ತಮ್ಮ ಜ್ಞಾಪನಾ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಸಾರಾಂಶವೆನೆಂದರೆ, ದಿನಾಂಕ.03/02/2020 ರಂದು 7-05 ಪಿಎಂ ಸುಮಾರಿಗೆ ನಾನು ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಇರುವ ಸದರಿ ಶ್ರೀ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿದ್ದಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಶ್ರೀ ಸದಾಶಿವ ಸೋನಾವಣೆ ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗಿರಿ ಹಾಗೂ ತಂಡದ ಮಾರ್ಗದರ್ಶನದಲ್ಲಿ ಯಾದಗಿರಿ ನಗರದ ಚಿತ್ತಾಪೂರ ರಸ್ತೆಗೆ ಇರುವ ಸದರಿ ಶ್ರೀ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿ ಸದರಿ ದಾಬಾದ ಮ್ಯಾನೇಜರನಾದ ಮಂಜುನಾಥ ಈತನು ತನ್ನ ಮೊಬೈಲದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಸದರಿಯವನ ಮೇಲೆ ದಾಳಿ ಮಾಡಿದಾಗ ಸಾಯಿ ಸಮರ್ಥ ದಾಬಾ/ರೆಸ್ಟೋರೆಂಟದಲ್ಲಿದ್ದ ಮಂಜುನಾಥ ಈತನ ಮೇಲೆ 7-15 ಪಿಎಮ್ ಕ್ಕೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಮಂಜುನಾಥ ತಂದೆ ರವೀಂದ್ರಕುಮಾರ ನಾಯಕ ವ;26 ಜಾ; ಬೇಡರು ಉ; ದಾಬಾದಲ್ಲಿ ಮ್ಯಾನೇಜರ ಸಾ; ವಾಲ್ಮೀಕಿ ನಗರ ಯಾದಗಿರಿ ಅಂತಾ ತಿಳಿಸಿದನು. ಅವನ ಹತ್ತಿರ ಇದ್ದ ಮೊಬೈಲ ಜಪ್ತಿಪಡಿಸಿಕೊಂಡು ಪರಿಶಿಲಿಸಲು ಆತನ ಹತ್ತಿರವಿದ್ದ ಒಪ್ಪೋ ಮೊಬೈಲ ನಂ.7892646315 ನೇದ್ದರಲ್ಲಿ ಕಲ್ಯಾಣ ಮತ್ತು ಮುಂಬಯಿ ಮಟಕಾ ಎಂಬುವ 1=00 ರೂಪಾಯಿಗೆ 80=00 ರೂ. ಅಂತಾ ಇರುವ ಅಂಕಿ ಸಂಖ್ಯೆಗಳು, ಮೊಬೈಲ ವಾಟ್ಸಪ ಮತ್ತು ಮೇಸೆಜಗಳಲ್ಲಿ ಇದ್ದು ಅವುಗಳನ್ನು ಒಂದು ಹಾಳೆಯಲ್ಲಿ ನಕಲು ಮಾಡಿಕೊಂಡು ಅವನಲ್ಲಿದ್ದ ಸದರಿ ಮೊಬೈಲನ್ನು ಮತ್ತು 50,220/- ರೂ ಹಣವನ್ನು ಜಪ್ತಿಪಡಿಸಿಕೊಂಡು, ಜಪ್ತಿ ಪಂಚನಾಮೆ ಮುದ್ದೆಮಾಲು, ಆರೋಪಿತನನ್ನು ಈ ಜ್ಞಾಪನ ಪತ್ರದೊಂದಿಗೆ ಹಾಜರುಪಡಿಸುತ್ತಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ್ದರ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಕುರಿತು ಪತ್ರ ಬರೆದುಕೊಂಡು ವಿನಂತಿಸಿಕೊಂಡಿದ್ದು ಪಿಸಿ 398 ರವರು ಇಂದು ದಿನಾಂಕ; 04/02/2020 ರಂದು 2-10 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ತಂದು ಹಾಜರುಪಡಿಸಿದ್ದು ನ್ಯಾಯಾಲಯದ ಪರವಾನಿಗೆ ಹಾಗೂ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 16/2020 ಕಲಂ.78(3) ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಗುರಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 20/2020 ಕಲಂ. ಮಹಿಳೆ ಕಾಣೆಯಾದ ಬಗ್ಗೆ :- ಇಂದು ದಿನಾಂಕ 04.02.2020 ರಂದು ಬೆಳಿಗ್ಗೆ 11.45 ಎ.ಎಂ ಕ್ಕೆ ಪಿರ್ಯಾಧಿ ಶ್ರೀ ನಾಗಪ್ಪ ತಂದೆ ದೇವಿಂದ್ರಪ್ಪ ಬೋಯಿನ್ ಈತನು ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ್ದೆನೆಂದರೆ ದಿನಾಂಕ 28.01.2020 ಸಾಯಂಕಾಲ 7.15 ಗಂಟೆ ಸುಮಾರಿಗೆ ನನ್ನ ತಂಗಿ ಮಲ್ಲಮ್ಮ ತಂದೆ ದೇವಿಂದ್ರಪ್ಪ ಬೋಯಿನ್ ಮನೆ ಹಿಂದೆ ಇರುವ ದೊಡ್ಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮನಗೆ ಬಂದಿರುವುದಿಲ್ಲ ಸದರಿಯವಳಿಗೆ ಎಲ್ಲಾ ಕಡೆ ಹುಡುಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ, ಕಾಣೆಯಾದ ನನ್ನ ತಂಗಿ ಹುಡುಕಿಕೋಡಬೆಕು ಅಂತಾ ಕೊಟ್ಟ ಪಿರ್ಯಾಧಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 20/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ