ಯಾದಗಿರ ಜಿಲ್ಲೆಯು 5234,4 ಚದರ ಕೀ. ಮೀ ಪ್ರದೇಶವನ್ನು ಆಕ್ರಮಿಸಿದೆ. ಇದು ರಾಜ್ಯದ ಎರಡನೇ ಚಿಕ್ಕ ಜಿಲ್ಲೆಯಾಗಿದೆ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 8.46% ಪ್ರತಿಶತ ಪ್ರದೇಶವನ್ನು ಒಳಗೊಂಡಿರುವ ಬೌಗೋಳಿಕ ಪ್ರದೇಶವಾಗಿದೆ. ಜಿಲ್ಲೆಯು 3 ತಾಲ್ಲೂಕು ಅವುಗಳೆಂದರೆ ಯಾದಗಿರಿ, ಶಹಾಪೂರ ಮತ್ತು ಸುರಪುರ. ಹಗೂ 3 ಹೊಸದಾಗಿ ಜಿಲ್ಲೆಯಾಗಿರುವ ಗುರಮಿಠಕಲ, ವಡಗೇರಾ ಮತ್ತು ಹುಣಸಗಿ ಜಿಲ್ಲೆಯಲ್ಲಿ ಒಟ್ಟು 16 ಕಂದಾಯ ಹೋಬಳಿಗಳು, 3 ನಗರಸಭೆ, 3ಪುರಸಭೆ, ಇದ್ದು ಒಟ್ಟಾರೆ 15 ಪೊಲೀಸ್ ಠಾಣೆಗಳು, 4 ವೃತ್ತ ಕಛೇರಿಗಳು ಹಾಗೂ 2 ಉಪ ವಿಭಾಗಳು ಇರುತ್ತವೆ. 519 ಹಳ್ಳಿಗಳು ಮತ್ತು 4 ವಿಧಾನಸಭಾ ಮತಕ್ಷೇತ್ರಗಳು, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ ಯಾದಗಿರಿ, ಶಹಾಪೂರ & ಸುರಪುರ ವಿಧಾನಸಭಾ ಮತಕ್ಷೇತ್ರಗಳು ರಾಯಚೂರು ಲೋಕಸಭಾ ವ್ಯಾಪ್ತಿ ಮತ್ತು ಗುರುಮಿಠಕಲ್ ವಿಧಾನಸಭಾ ಮತ ಕ್ಷೇತ್ರವು ಗುಲಬರ್ಗಾ ಲೋಕಸಭಾ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.